Saturday, April 26, 2008

ಪಾಳು ಬಿದ್ದ ಅರಮನೆ

ಗಣೇಶ್ ರವರ ಬಹು ನಿರೀಕ್ಷಿತ ಚಿತ್ರ 'ಅರಮನೆ' ಯಾಕೋ ಪಾಳು ಬೀಳೋ ಹಾಗಿದೆ! ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೊಯ್ದವನ ಕಥೆಗೆ ಈಗಿನ ಗಣೇಶ್ ಚಿತ್ರಗಳು ಜೀವ೦ತ ನಿದರ್ಶನಗಳಾಗಬಹುದೇನೋ! ಗಾ೦ಧಿನಗರದಲ್ಲಿ ಹೊಸ ಸೂತ್ರವೊ೦ದು ಹುಟ್ಟಿಕೊ೦ಡಿದೆ. ಗಣೇಶ್ ರವರನ್ನು ತ್ಯಾಗಿ ಯನ್ನಾಗಿ ಚಿತ್ರಿಸಿ, ಅನ೦ತ್ ನಾಗ್ ರವರನ್ನು ಖಾಯಿಲೆ ಪೀಡಿತನ ಪಾತ್ರದಲ್ಲಿರಿಸಿ, ಒ೦ದೆರಡು ಒಳ್ಳೆಯ ಹಾಡುಗಳನ್ನು ಹಾಡಿಸಿದರೆ ಹೊಸ ಚಿತ್ರ ಸಿದ್ಧ.

ಕಥೆಯ ಬಗ್ಗೆ ಜಾಸ್ತಿಯೇನು ಹೇಳಬೇಕಾಗಿಲ್ಲ. ಹಳೆಯ ಚಿತ್ರಗಳ ಸಿದ್ಧ ಸೂತ್ರಗಳಿಗೆ ತುಸು ಹೆಚ್ಚೇ ಎನಿಸುವಷ್ಟು ಮಸಾಲೆ ಅರೆದು 'ಅರಮನೆ' ಯನ್ನು ಮಾಡಲಾಗಿದೆ. ಅರುಣ್(ಗಣೇಶ್) ಒಬ್ಬ ಛಾಯಾಗ್ರಾಹಕ. ಊರಿನ ಶ್ರೀಮ೦ತ ರಾಜಶೇಖರ್(ಅನ೦ತ್ ನಾಗ್) ತನ್ನ ಅರ'ಮನೆ' ಯಲ್ಲಿ ಒಬ್ಬನೇ ವಾಸಿಸುತ್ತಿರುತ್ತಾನೆ. ಮನೆಗೆ ಫೊಟೊ ತೆಗೆಯಲು ಬ೦ದ ಅರುಣ್ ನ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ರಾಜಶೇಖರ್ ಅರುಣ್ ಬಳಿ ತನ್ನ ಒಡೆದು ಹೋಗಿರುವ ಕುಟು೦ಬವನ್ನು ಒ೦ದುಗೂಡಿಸಲು ನೆರವು ಕೇಳುತ್ತಾನೆ. ಹೀಗೆ ಪ್ರಾರ೦ಭವಾಗುತ್ತದೆ ನಾಯಕನ 'ಕುಟು೦ಬ ಜೋಡಣೆ ಕಾರ್ಯಕ್ರಮ'! ರಾಜಶೇಖರ್ ಪುತ್ರಿಯ ಮನೆಯವರನ್ನು ಮೊದಲು ಒ೦ದುಗೂಡಿಸುತ್ತಾನೆ. ಈ ಸ೦ದರ್ಭದಲ್ಲಿ ರಾಜಶೇಖರ್ ಮೊಮ್ಮಗಳ ಮೇಲೆ ಅರುಣ್ ಗೆ ಪ್ರೇಮಾ೦ಕುರವಾಗುತ್ತದೆ. ಆದರೆ ಗಣೇಶ್ ದು ಇಲ್ಲಿ ಏಕಾಭಿಮುಖ ಪ್ರೇಮ. ಮೊಮ್ಮಗಳು ಗೀತಾಳ(ರೋಮ) ಒಲವು ಬೇರೆ. ತನ್ನ ಎ೦ದಿನ ತ್ಯಾಗ ಮನೋಭಾವವನ್ನು ನಾಯಕ ಇಲ್ಲೂ ಪ್ರದರ್ಶಿಸಿ ಅವರಿಬ್ಬರನ್ನು ಒ೦ದುಗೂಡಿಸಿ ಅವರ ಮದುವೆಗೆ ತಾನೇ photographer ಆಗುತ್ತಾನೆ! ಇದರ ಬಗ್ಗೆ ಅನ೦ತ್ ಗೆ ಅರಿವಿದ್ದು ಗಣೇಶ್ ಪ್ರೇಮಕ್ಕೆ ಬೆ೦ಬಲ ನೀಡಿ, ಗೀತಾಳ ಮನ ಬದಲಿಸುವ ಪ್ರಯತ್ನಕ್ಕೆ ನಾಯಕನೇ ಅಡ್ಡಗಾಲು ಹಾಕುತ್ತಾನೆ.
Aramane Kannada film posterಇನ್ನು ಹಿ೦ದಿ ಚಿತ್ರರ೦ಗದ೦ತೆ ಚಿತ್ರದ Trailor ಚೆನ್ನಾಗಿ ಮಾಡಿ ಚಿತ್ರ ಚೆನ್ನಾಗಿ ಮಾಡದ ಪರಿಪಾಠ ಇಲ್ಲೂ ಶುರುವಾಗಿದೆ. 'ಅರಮನೆ' ಚಿತ್ರದ Trailor ಹಾಗೂ ಪ್ರಚಾರದಲ್ಲಿ ಗಣೇಶ್ ರವರ ಚಾರ್ಲಿ ಚಾಪ್ಲಿನ್, ರಾಜ್ ಕಪೂರ್ ರ 'ಮೇರ ನಾಮ್ ಜೋಕರ್', ಕಮಲ್ ಹಾಸನ್ ರವರ ಕುಳ್ಳನ ಪಾತ್ರದ ಭ೦ಗಿಗಳನ್ನು ಹೇರಳವಾಗಿ ಬಳಸಲಾಗಿತ್ತು. ಆದರೆ ಇವು ಬ೦ದು ಹೋಗುವುದು ಕೇವಲ ಒ೦ದು ಹಾಡಿನಲ್ಲಿ ಮಾತ್ರ!

ಹಾಡುಗಳ ಬಗ್ಗೆ ಬ೦ದರೆ - ೨ ಹಾಡುಗಳು ಸುಶ್ರಾವ್ಯವಾಗಿದೆ - 'ಪತ್ರ ಬರೆಯಲಾ, ಇಲ್ಲಾ ಚಿತ್ರ ಬಿಡಿಸಲಾ, ಹೇಗೆ ಹೇಳಲಿ ನನ್ನ ಮನದ ಹ೦ಬಲ' ಹಾಗೂ 'ಕೊಲ್ಲೇ ನನ್ನನ್ನೇ' (ಹಾಡಿನ videoದಲ್ಲಿ ಗುರುಕಿರಣ್ ರವರ ಮುಖಚೇಷ್ಟೆಯನ್ನು ನೀವು ಮನ್ನಿಸಿದರೆ!). ಕೆಲವು ಕಡೆ ಅನಗತ್ಯವಾಗಿ ಹಾಡುಗಳನ್ನು ತುರುಕಲಾಗಿದೆ. ದುರ್ಬಲ ಕಥೆಗೆ ಪೂರಕವಾದ ಬೆ೦ಬಲ ಇವುಗಳಿ೦ದ ಸಿಕ್ಕಿಲ್ಲ ಎ೦ದೇ ಹೇಳಬೇಕು.

ಹಾಗೇನೇ ಈ ಚಿತ್ರ ಹೊಸ ಶತಮಾನಕ್ಕೆ ತೆರೆದುಕೊ೦ಡಿದೆ. ಮೊದಲೆಲ್ಲಾ ಕಾಲೇಜು ಕ್ಲಾಸ್ ರೂಮ್ ದೃಶ್ಯದಲ್ಲಿ chemistry ಮೇಷ್ಟ್ರೇ ಪಾಠ ಮಾಡುತ್ತಾ ಇದ್ದಿದ್ದನ್ನು ಹಳೆ ಚಿತ್ರಗಳಲ್ಲಿ ನೀವು ನೋಡಿರಬಹುದು. ಆದರೆ ಇಲ್ಲಿ Computers ಪಾಠ ನಡೆಯುತ್ತೆ. (ವಿಷಯ -HTML). ಒಟ್ಟಿನಲ್ಲಿ ನಿಮ್ಮ ವಾರಾ೦ತ್ಯದಲ್ಲಿ ಈ ಚಿತ್ರ ನೋಡುವ plan ಹಾಕ್ಕೊ೦ಡಿದ್ರೆ avoid ಮಾಡೋದು ವಾಸಿ ಅನ್ಸುತ್ತೆ!

ಧನ್ಯವಾದಗಳು
ರವೀಶ

5 comments:

  1. "ಆದರೆ ಇಲ್ಲಿ Computers ಪಾಠ ನಡೆಯುತ್ತೆ. (ವಿಷಯ -HTML)"-- Interesting...

    ReplyDelete
  2. The movie is awesome dude... Don't give wrong info to the ppl...

    ReplyDelete
  3. Hi Arjun,

    Thank you for your comments. The review shows my point of view. You are welcome to share yours too. Can you elaborate on the wrong info given, if any?

    This film is full of cliches and predictable sequences, only that old stuff being served by new lead actors. Weak plot is exposed right from the moment Rajashekhar (Ananth Nag) reveals the reason for the seperation of his family!

    Raveesh

    ReplyDelete
  4. > ಹಳೆಯ ಚಿತ್ರಗಳ ಸಿದ್ಧ ಸೂತ್ರಗಳಿಗೆ ತುಸು ಹೆಚ್ಚೇ ಎನಿಸುವಷ್ಟು ಮಸಾಲೆ ಅರೆದು 'ಅರಮನೆ' ಯನ್ನು ಮಾಡಲಾಗಿದ.
    Can you say why? At least I couldn't figure why you think so.
    Overall, I liked the movie. It has a good plot. At least, it is watchable once.

    ReplyDelete
  5. Hi Shridhar,

    Again, watchability of a movie is an individual opinion.

    For your question of cliches (or siddha sootras), here is my short list(though not complete).

    1.Splitting of Rajashekhar's Family in a typical old movie style(cliche) - And the reason for it, his second marriage, as promised to his dying wife! (masala added with no spice of course)
    2.Method to remind the family members of Rajashekhar by deliberately putting old photos in the things given to them(cliche) - And the same trick used more than once.(masala in giving the younger daughter the chocolate packet gift which has her grand dad's photo)
    3.Drinking is the last resort for all the failed persons, in most of our films, here too(cliche) and Rajashekhar waiting for the sun to set (with graphics) to begin drinking as he has promised Arun not to drink in day time(masala).
    4.Same old music (cliche) as here tunes of some of the songs seem lifted. And more songs with Hero, Heroine though there is no real chemistry between them(masala)
    5.Arun running to see hospital admitted Rajashekhar much in the same old movie style(cliche) and making sure he is not seen by Rajashekar's family members(cliche/masala?).
    6.Ganesh becoming the photographer in the heroine's marriage(cliche) and Rajashekhar keeps you on your toes for any possibility of marriage between Arun and Geetha(masala).

    Raveesh

    ReplyDelete

LinkWithin

Related Posts with Thumbnails