Monday, January 22, 2007

ಪ್ರಾಥಮಿಕ ಶಿಕ್ಷಣವೂ, ಆಂಗ್ಲ ಭಾಷೆಯೂ

ಅಂತೂ ಇ೦ತೂ ಈ ವರ್ಷದಿ೦ದ ಕರ್ನಾಟಕದಲ್ಲಿ ಆಂಗ್ಲ ಭಾಷೆಯನ್ನು ಎಲ್ಲಾ ಶಾಲೆಗಳಲ್ಲೂ ಒ೦ದನೇ ತರಗತಿಯಿಂದಲೇ ಬೋಧಿಸಲು ಸರಕಾರ ಮು೦ದಾಗಿದೆ. ಹೀಗೆ ಮೇಲ್ನೋಟಕ್ಕೆ ಇದರ ಬಗ್ಗೆ ಇದ್ದ ವಿವಾದಗಳಿಗೆ ತೆರೆ ಬಿದ್ದಂತಾಗಿದೆ. ಈ ಹಿಂದಿನ ವಿವಾದಗಳಲ್ಲಿ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದವರೆಲ್ಲರೂ ಭಾಗಿಯಾಗಿದ್ದರು ಎ೦ದರೆ ಅತಿಶಯೋಕ್ತಿಯಾಗಲಾರದು. ಇದರ ಜೊತೆಗೆ ಇತರೆ ಭಾಷಾ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ.

ಇಲ್ಲಿ ವಾದ-ಪ್ರತಿವಾದಗಳ ಮುಖ್ಯ ಅಂಶಗಳನ್ನು ಗಮನಿಸಬೇಕು. ಭಾಷೆ-ಸಂಸ್ಕೃತಿಯ ಬಗ್ಗೆ ಮುಂದಿನ ಪೀಳಿಗೆಯಲ್ಲಿ ಅರಿವು ಮೂಡಿಸಲು, ಗೌರವಿಸಲು ಪಾಠಶಾಲಾ ಕಲಿಕೆ ಮೊದಲ ಹೆಜ್ಜೆ. ನಾಡು-ನುಡಿವಿನ ಬಗ್ಗೆ ಅರಿವು, ಆದರ ಹೀಗೆ ಬಾಲ್ಯದಲ್ಲಿ ಆರಂಭವಾಗುತ್ತದೆ. ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಆ೦ಗ್ಲಮಾಧ್ಯಮದಲ್ಲಿ ಓದಿಸಲು ಮು೦ದಾಗುತ್ತಾರೆ. ಇದು ಇ೦ದಿನ ಅಗತ್ಯ ಕೂಡ. ಆಂಗ್ಲ ಭಾಷೆ ಇ೦ದಿನ ಜಾಗತೀಕರಣದ ಯುಗದಲ್ಲಿ ಯಶಸ್ಸಿನ ಹಲವು ಸೂತ್ರಗಳಲ್ಲಿ ಒ೦ದಾಗಿರುವುದು ಇದಕ್ಕೆ ಕಾರಣವಿರಬಹುದು. ಇದಕ್ಕೇ ಇರಬೇಕು ಆರ್ಥಿಕವಾಗಿ ದುರ್ಬಲರೂ ಕೂಡ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಕಲಿಸಲು ಮು೦ದಾಗಿರುವುದು.

ಸಾಮನ್ಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಕಾಲೇಜು ಸೇರುವಾಗ ಅಥವಾ ನ೦ತರ ಕೆಲಸ ಹುಡುಕುವಾಗ ಆಂಗ್ಲ ಮಾಧ್ಯಮದಲ್ಲಿ ಓದಿದವರಿಗಿಂತ ತಾವು ಕಡಿಮೆಯೇನೋ ಎ೦ದೆನಿಸಿ ಕೀಳರಿಮೆ, ಆತ್ಮವಿಶ್ವಾಸದ ಕೊರತೆ ಕಂಡುಬರುತ್ತದೆ. ಅದಕ್ಕೆ ಸರಕಾರದ ಈ ಕ್ರಮ ಪರಿಹಾರವಾಗಬಹುದೇನೋ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಕಂಡುಬರುವ ತಾರತಮ್ಯ ಹೀಗೆ ಕಡಿಮೆಯಾದರೆ ಸಂತೋಷ. ಹಾಗೇಯೇ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮವಾಗಿರಲಿ. ನಮ್ಮ ಹಲವಾರು ಹೆಸರಾಂತ ವಿಜ್ನಾನಿಗಳು, ಸಾಧಕರು ಆಂಗ್ಲ ಮಾಧ್ಯಮ ದಲ್ಲಿ ಓದಿದವರಲ್ಲ. ಸಾಧನೆಗೆ ಜ್ನಾನ ಮುಖ್ಯವೇ ಹೊರತು ಭಾಷೆಯಲ್ಲ. ಭಾಷೆಯು ಅಭಿವ್ಯಕ್ತಪಡಿಸುವ ಮಾಧ್ಯಮವಷ್ಟೆ.

ಕೊನೆಯಲ್ಲೊಂದು ಮಾತು. ಭಾರತದ ಇಂದಿನ ಶಿಕ್ಷಣ ಪದ್ಧತಿಯ ಹರಿಕಾರ, ಮೆಕಾಲೆ ಬ್ರಿಟಿಷ್ ಸಂಸತ್ತಿಗೆ ನೀಡಿದ ವಿವರಣೆಯಲ್ಲಿ ಹೀಗೆ ಹೇಳಿದ್ದಾನೆ : "ಭಾರತದಂತಹ ಸಂಪತ್ಭರಿತ, ಉನ್ನತ ಮೌಲ್ಯಗಳುಲ್ಲ ಜನರಿರುವ ದೇಶವನ್ನು ನಾವು ಜಯಿಸುವುದು ಅಸಾಧ್ಯವೆನಿಸುತ್ತಿದೆ. ನಾವಿಲ್ಲಿ ನಮ್ಮ ಪ್ರಭುತ್ವ ಸಾಧಿಸಬೇಕಾದರೆ ಈ ದೇಶದ ಸನಾತನ ಶಿಕ್ಷಣ ಪದ್ಧತಿಯನ್ನು ಬದಲಾಯಿಸಬೇಕು. ಎಂದು ಭಾರತೀಯರು ತಮ್ಮ ಭಾಷೆ, ಸಂಸ್ಕೃತಿಗಿಂತ ಆಂಗ್ಲ ಭಾಷೆ, ಪಾಶ್ಚ್ಯಾತ್ಯ ಸಂಸ್ಕೃತಿ ಶ್ರ್‍ಏಷ್ಠವೆಂದು ಭಾವಿಸುವರೋ ಅಂದು ಅವರು ತಮ್ಮ ಸಂಸ್ಕೃತಿ, ಸ್ವಾಭಿಮಾನವನ್ನು ಮರೆತು ನಮ್ಮ ಗುಲಾಮರಾಗುವರು." ಪಾಶ್ಚ್ಯಾತ್ಯದ್ದೆಲ್ಲವೂ ಶ್ರ್‍ಏಷ್ಠವೆಂದು ಭಾವಿಸುವವರಿಗೆ ಈ ಸತ್ಯ ಕಣ್ತೆರೆಸಬೇಕು. ಮೆಕಾಲೆಯು ತನ್ನ ಈ ಪ್ರಯತ್ನದಲ್ಲಿ ಗುಮಾಸ್ತರ ದೇಶವೊಂದನ್ನು ಸೃಷ್ಟಿಸಿದ ಎಂಬ ಮಾತಿದೆ. ಈಗಿನ ಹೊರ ಗುತ್ತಿಗೆ ಉದ್ಯಮವೂ ಇದಕ್ಕೆ ಅಪವಾದವಾಗಲಾರದು. ಬ್ರಿಟಿಷರಿಂದ ಸ್ವತಂತ್ರರಾಗಿ ೬೦ ವರ್ಷಗಳಾದರೂ ಅವರ ಭಾಷೆಗೆ, ಪ್ರಾರಂಭಿಸಿದ ವ್ಯವಸ್ಥೆಗೆ ಜೋತು ಬಿದ್ದಿರುವುದು ಕಂಡುಬರುತ್ತದೆ. ಇನ್ನಾದರು ನಮ್ಮಲ್ಲಿ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಬೇಕು. ಹಾಗೆಯೇ ಕಾಲಕ್ಕನುಗುಣವಾಗಿ ನಮ್ಮ ವೃತ್ತಿ ಕೌಶಲವನ್ನು ಹೆಚ್ಚಿಸಕೊಳ್ಳಬೇಕು. ಆದರೆ ಇದೆಲ್ಲವೂ ನಮ್ಮ ಭಾಷೆ, ಸಂಸ್ಕೃತಿಯನ್ನು ತ್ಯಜಿಸಿಯಲ್ಲ.

Tuesday, January 16, 2007

In The Time Of Change…

Again the time for comparisions. News of Kaun Banega Karodpathi 3(KBC 3) being up next on STAR’s agenda has been doing rounds for quite some time now. And this time host is different, King Khan of Bollywood. Big B’s success as TV show host from the previous two parts of KBC is evident. With his charisma having a magical effect still on the audience as well as the contestants, Shah Rukh Khan’s task is deemed to be a tough one. Already Radio One 94.3 has started comical series ‘KBC Ki Paathshaala’ on air with SRK getting tips from AB.

When an actor, host establishes a niche for himself in the mind of the audience and it is hard for the other person, if any, to get into the shoes of the originator. You just can’t get away with comparisions between the two which are inevitable. Thus when we think of KBC, Big B is always there in mind. This is even true with characters played by the actors. Sometimes the role played by actors becomes so popular that they become synonymous with their roles. For India, I think Nitish Bharadwaj who played the role of Lord Krishna in TV serial Mahabharath is the invisible god personified. After that, so many mythological TV serials have been there with Lord Krishna being one of the characters but it is hard to accept him in place of Nitish. Ditto the role of Swamy played by Manjunath in the TV serial Malgudi Days directed by Shankar Nag who is the perfect face for those who are looking for the visual picture of Swamy while reading RK Narayan’s Malgudi Days. And in recent times how can one forget the hugely popular role of Circuit played by Arshad Warsi in Munna Bhai MBBS and Lage Raho Munna Bhai. After that you don’t want to see any one else playing the role of Swamy or Circuit. Can we say it for the James Bond as well with new bond Daniel Craig not being well received in place of Pierce Brosnan?

Early advantage is always there. And when the character or role is played by the actor successfully, it becomes the bench mark for the rest to follow. That is what has happened in the KBC case. Audience expects the role to be better enacted than the previous one. Most of the times audience resist even the slightest change in the role and that is why most of the times sequels with role played by a different actor fails. But what I feel in the KBC case is that in SRK’s case, he should be left alone to don the role in his own way with his own charisma and not simply emulate anyone else.

What are your thoughts on it? Put them in your comments.

LinkWithin

Related Posts with Thumbnails