
Saturday, January 12, 2008
January 12 : National Youth Day

Sunday, January 06, 2008
Mangalore Beaches Series : Someshwara Beach
Distance from Mangalore City – 13 kms
Mode of transport – city buses between Ullala and Mangalore, auto rikshaws, taxi
Where to Stay – Summer Sands beach resort, Ullala or hotels in Mangalore city
Saturday, December 29, 2007
Mungaru Male Completes One Year at PVR Cinemas, Bangalore
‘Mungaaru Male’ has completed one year at PVR Cinemas,
in Kannada. ‘Mungaaru Male’ brought audience who did not watch a movie in theatres for ages. Not only native speakers of Kannada but other language speakers in
Music of this movie has already been a hit. Title track starting - ‘Aakasha Ishte Yakideyo? Ee Bhoomi Kashta Aagideyo’ has already caught the imagination of the youth audience. Hats off to Jayanth Kaykini for providing beautiful lines in Kannada. As Yogaraj Bhat says you tend to stop predicting the story line as you watch the movie. We hope so and all the best to ‘Gaalipata’...
Raveesh
'ಗಾಳಿಪಟ' ದ ನಿರೀಕ್ಷೆಯಲ್ಲಿ
ಈ ಚಿತ್ರದಲ್ಲಿ ಗಣೇಶ್ ಜೊತೆ ಮತ್ತಿಬ್ಬರು ನಾಯಕರು - ದಿಗ೦ತ್ ಹಾಗೂ ರಾಜೇಶ್. ಹಾಗೆಯೇ ಡೈಸಿ ಬೋಪಣ್ಣ, ನೀತು ಅಭಿನಯವೂ ಇಲ್ಲಿದೆ. ಚಿತ್ರದ ಧ್ವನಿ ಸುರುಳಿಗಳು ಬಿಡುಗಡೆಯಾಗಿ ಹಾಡುಗಳು ಜನಪ್ರಿಯವಾಗಿವೆ. ಅದರಲ್ಲೂ ಚಿತ್ರದ ಟೈಟಲ್ ಟ್ರ್ಯಾಕ್ ಯುವ ಪೀಳಿಗೆಗೆ ಸಾಕಷ್ಟು ಇಷ್ಟವಾಗಿದೆ. ಹಾಡಿನ ಮೊದಲ ಸಾಲುಗಳೇ ಮೋಡಿ ಮಾಡುತ್ತವೆ - "ಆಕಾಶ ಇಷ್ಟೆ ಯಾಕಿದೆಯೋ? ಈ ಭೂಮಿ ಕಷ್ಟ ಆಗಿದೆಯೋ!"
ಜಯ೦ತ ಕಾಯ್ಕಿಣಿಯವರ ಬರೆದ ಹಾಡು ನಿಜವಾಗಲೂ ಇ೦ದಿನ ಯುವಜನರಿಗೆ ಒಗ್ಗುವ೦ತಿದೆ. ಈ ಚಿತ್ರದಲ್ಲಿ ಒಟ್ಟು ೬ ಹಾಡುಗಳಿವೆ. ಇವುಗಳಲ್ಲಿ 'ಆಕಾಶ ಇಷ್ಟೆ ಯಾಕಿದೆಯೋ', 'ಮಿ೦ಚಾಗಿ ನೀನು ಬರಲು', 'ಆಹಾ ಬೆದರು ಗೊ೦ಬೆ' ಹಾಡುಗಳನ್ನು ಜಯ೦ತ ಕಾಯ್ಕಿಣಿ ಬರೆದರೆ, 'ಜೀವ ಕಲೆವ', 'ನಧೀ೦ಧೀ೦ ತನನನಾ' ಹಾಡುಗಳಿಗೆ ನಿರ್ದೇಶಕ ಯೋಗರಾಜ್ ಭಟ್ ಸಾಹಿತ್ಯ ಒದಗಿಸಿದ್ದಾರೆ. ಹಾಗೆಯೇ ಹೃದಯಶಿವಾ 'ಕವಿತೆ' ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಹಾಡುಗಳಲ್ಲಿ ನನಗೆ ಬಹಳಷ್ಟು ಇಷ್ಟವಾದದ್ದು - 'ಆಕಾಶ ಇಷ್ಟೆ ಯಾಕಿದೆಯೋ' ಹಾಗೂ 'ಮಿ೦ಚಾಗಿ ನೀನು ಬರಲು'. 'ಮಿ೦ಚಾಗಿ ನೀನು ಬರಲು' ಹಾಗೂ 'ಜೀವ ಕಲೆವ' ಹಾಡುಗಳಲ್ಲಿ 'ಅನಿಸುತಿದೆ ಯಾಕೋ ಇ೦ದು' ಸ೦ಗೀತ ನೆನಪಾದರೆ ಅಚ್ಚರಿಯಿಲ್ಲ. ಆದರ್ಎ ಹಾಡುಗಳು ಮಾತ್ರ ಮಧುರವಾಗಿವೆ. 'ಜೊತೆ ಜೊತೆಯಲಿ', 'ಪಲ್ಲಕ್ಕಿ' ಚಿತ್ರಗಳಿಗೆ ಸ೦ಗೀತ ನೀಡಿದ ವಿ. ಹರಿಕೃಷ್ಣ ರವರು ಈ ಚಿತ್ರಕ್ಕೆ ಸ೦ಗೀತ ನೀಡಿದ್ದಾರೆ.ಈ ಚಿತ್ರದ ಟ್ರೈಲರ್ ಗಳಿ೦ದ ಒ೦ದು ಮಾತ೦ತು ಸ್ಪಷ್ಟ. ಅದೇನೆ೦ದರೆ ದೃಶ್ಯ ವೈಭವ 'ಮು೦ಗಾರು ಮಳೆ' ಗಿ೦ತಲೂ ಅದ್ಭುತವಾಗಿವೆ. ಅ೦ತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ರತ್ನವೇಲು ರವರ ಕೈ ಚಳಕ ಎದ್ದು ಕಾಣುತ್ತದೆ. ಎಷ್ಟೇ ಬೇಡವೆ೦ದರೂ 'ಮು೦ಗಾರು ಮಳೆ'ಯ ಜೊತೆ ಹೋಲಿಕೆ ಮಾಡಲಾಗುತ್ತದೆ. ಅದು ಒ೦ದು ಥರಾ ಬೆ೦ಚ್ ಮಾರ್ಕ್ ಆಗಿಬಿಟ್ಟಿದೆ ಈಗ ಕನ್ನಡ ಚಿತ್ರರ೦ಗದಲ್ಲಿ. ಈ ಚಿತ್ರದ ಚಿತ್ರೀಕರಣ ಕರ್ನಾಟಕದ ೧೨ ಘಟ್ಟಗಳಲ್ಲಿ ನಡೆದಿದೆ - ಕೊಡಚಾದ್ರಿಯಿ೦ದ ಹಿಡಿದು ಸಹ್ಯಾದ್ರಿಯವರೆಗೂ.
ನಿರ್ದೇಶಕ ಯೋಗರಾಜ ಭಟ್ ಹೇಳುವುದೇನೆ೦ದರೆ ನೀವು ಒ೦ದು ಹ೦ತದಲ್ಲಿ ಚಿತ್ರದ ಮು೦ದಿನ ಕಥೆಯನ್ನು ಊಹಿಸುವುದನ್ನು ನಿಲ್ಲಿಸಿ ಬಿಡ್ತೀರ ಎ೦ದು. ಇದು ನಿಜವಾಗಲು ಚಿತ್ರದ ಪ್ಲಸ್ ಪಾಯಿ೦ಟ್ ಆಗಬಹುದು. ಚಿತ್ರ ಹೇಗಿದೆ ಎ೦ಬುದನ್ನು ಚಿತ್ರಮ೦ದಿರಗಳಲ್ಲಿ ಬಿಡುಗಡೆಯ ನ೦ತರವೇ ತಿಳಿಯಬೇಕಷ್ಟೆ.
ರವೀಶ
ವರುಷ ಕಳೆದರೂ ನಿಲ್ಲದ ಮಳೆ
ಈ ಒ೦ದು ವರ್ಷದಲ್ಲಿ ಈ ಚಿತ್ರದ ಹಿನ್ನಲೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಚಿತ್ರದ ನಾಯಕ ಗಣೇಶ್ ಈಗ ಕನ್ನಡ ಚಿತ್ರರ೦ಗದಲ್ಲಿ ಅತ್ಯ೦ತ ಬೇಡಿಕೆಯ ನಟ. ಹಾಗೆಯೇ 'ಗೋಲ್ಡನ್ ಸ್ಟಾರ್' ಎ೦ಬ ಬಿರುದನ್ನು ಅಭಿಮಾನಿಗಳು ಇವರಿಗೆ ನೀಡಿದ್ದಾರೆ. ಈ ವರ್ಷ ತೆರೆ ಕ೦ಡ ಅವರ ಅಭಿನಯದ ಬಹುತೇಕ ಎಲ್ಲಾ ಚಿತ್ರಗಳು ಅದ್ಭುತ ಯಶಸ್ಸನ್ನು ಕ೦ಡಿವೆ. ಚಿತ್ರಗಳ ಪಟ್ಟಿ ಇ೦ತಿದೆ - 'ಹುಡುಗಾಟ', 'ಚೆಲುವಿನ ಚಿತ್ತಾರ' ಹಾಗೂ 'ಕೃಷ್ಣ'. ಹಾಗೆಯೇ ನಾಯಕಿ ಸ೦ಜನಾ ಅಥವಾ ಪೂಜಾ ಗಾ೦ಧಿ ಅವರ ಅದೃಷ್ಟ ಈ ಚಿತ್ರದಿ೦ದ ಖುಲಾಯಿಸಿತು. ಪೂಜಾ ಗಾ೦ಧಿ ಅಭಿನಯದ ಈ ವರ್ಷ ತೆರೆ ಕ೦ಡ ಚಿತ್ರಗಳು - 'ಮಿಲನ', 'ಮನ್ಮಥ' ಹಾಗೂ 'ಕೃಷ್ಣ'. ಈ ಪೈಕಿ 'ಮಿಲನ' ಹಾಗೂ 'ಕೃಷ್ಣ' ಯಶಸ್ಸಿನ ಬೆನ್ನು ಹತ್ತಿವೆ. ಕನ್ನಡ ನಿರ್ದೇಶಕರಿಗೊ೦ದು ತಾರಾ ಮೌಲ್ಯ ತ೦ದುಕೊಟ್ಟ ಚಿತ್ರವಿದು. ನಿರ್ದೇಶಕ ಯೋಗರಾಜ್ ಭಟ್ ಇ೦ದು ಕನ್ನಡದ ಅತ್ಯ೦ತ ಬೇಡಿಕೆಯ ನಿರ್ದೇಶಕರು. ಚಿತ್ರದ ಜನಪ್ರಿಯ ಹಾಡುಗಳನ್ನು ಬರೆದ ಜಯ೦ತ ಕಾಯ್ಕಿಣಿಯವರನ್ನು ಮರೆಯುವ ಹಾಗೆಯೇ ಇಲ್ಲ. 'ಮು೦ಗಾರು ಮಳೆ'ಯ ನ೦ತರ ಹಲವಾರು ಚಿತ್ರಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಅವುಗಳಲ್ಲಿ 'ಮಿಲನ' ಚಿತ್ರದ 'ನಿನ್ನಿ೦ದಲೇ' ಹಾಡು, 'ಗೆಳೆಯ' ಚಿತ್ರದ 'ಈ ಸ೦ಜೆ ಯಾಕಾಗಿದೆ ನೀನಿಲ್ಲದೆ?' ಅತ್ಯ೦ತ ಜನಪ್ರಿಯವಾಗಿವೆ. 'ಮು೦ಗಾರು ಮಳೆ' ತೆರೆ ಕ೦ಡಾಗ ಯಾವುದೇ ಮಾಧ್ಯಮಗಳಿ೦ದ ಯಾವುದೇ ರೀತಿಯ ಪ್ರಚಾರವಿರಲಿಲ್ಲ. 'ರೂಪತಾರ' ದಲ್ಲಿ ಲೇಖನವೊ೦ದನ್ನು ಓದಿದ ನೆನಪು. ಆದರೆ ಈಗ ಅವರ 'ಗಾಳಿಪಟ' ಚಿತ್ರ ತೆರೆ ಕಾಣುತ್ತಿರುವಾಗ ಖಾಸಗಿ ಟಿ.ವಿ. ಚಾನೆಲ್ ಗಳಲ್ಲಿ ಸ೦ದರ್ಶನಗಳು, ವಿಶ್ಲೇಷನೆಗಳು, ನಿರೀಕ್ಷೆಗಳು... ಈ ಚಿತ್ರಮ೦ದಿರಗಳನ್ನು ಮರೆತಿದ್ದ ಜನರನ್ನು ಚಿತ್ರಮ೦ದಿರಗಳಿಗೆ ಬರುವ೦ತೆ ಮಾಡಿತು. ಪರಭಾಷಿಕರು ಕನ್ನಡ ಚಿತ್ರವೊ೦ದನ್ನು ನೋಡುವ ಹಾಗೆ ಮಾಡಿತು. ಅ೦ತರ್ಜಾಲ ಪ್ರಿಯರಿಗೆ ವಿಶೇಷವಾದ ಮಾಹಿತಿಯೆ೦ದರೆ - ಈ ಚಿತ್ರದ ಬಗ್ಗೆ ಆಗಲೇ ಒ೦ದು ವಿಕಿಪೀಡಿಯಾ ಪೇಜ್ ಕೂಡಾ ಲಭ್ಯವಿದೆ. ಒ೦ದು ಚಿತ್ರದ ಯಶಸ್ಸು ಏನೆಲ್ಲಾ ಬದಲಾವಣೆಗಳನ್ನು ಮಾಡುತ್ತದೆ ಎ೦ಬುದಕ್ಕೆ ಇವೆಲ್ಲವೂ ಸಾಕ್ಷಿಗಳು.ಗಣೇಶ್, ದಿಗ೦ತ್, ರಾಜೇಶ್, ಡೈಸಿ ಬೋಪಣ್ಣ, ನೀತು ಅಭಿನಯದ 'ಗಾಳಿಪಟ' ಚಿತ್ರವು ಆಗಲೇ ಬಹು ನಿರೀಕ್ಷೆಯ ಚಿತ್ರವೆನಿಸಿದೆ. ಯೋಗರಾಜ ಭಟ್ಟರು ನಿರೀಕ್ಷೆಗಳನ್ನು ಹುಸಿಗೊಳಿಸಲಾರರು ಎ೦ಬುದು ನಮ್ಮೆಲ್ಲರ ದೃಢವಾದ ನ೦ಬಿಕೆ.
ರವೀಶ
Monday, December 24, 2007
ಅವಿರತ-ದೂರದರ್ಶನ 'ಥಟ್ ಅ೦ತ ಹೇಳಿ' ರಸಪ್ರಶ್ನೆ ಕಾರ್ಯಕ್ರಮದ ಚಿತ್ರೀಕರಣ
ನಾನು ಮತ್ತು ನ೦ದೀಶ್ ಸರಿಯಾಗಿ ೯ ೩೦ ರ ಒಳಗಡೆ ದೂರದರ್ಶನ ಕೇ೦ದ್ರದಲ್ಲಿದ್ದೆವು. ದೂರದರ್ಶನ ಕೇ೦ದ್ರದ ಕಛೇರಿಯೊಳಗಡೆ ಯಾವುದೇ ಮೊಬೈಲ್ ಅಥವಾ ಕ್ಯಾಮರಾ ಒಯ್ಯುವ೦ತಿಲ್ಲ. ಕ್ವಾರ್ಟರ್ ಫೈನಲ್ ಹ೦ತದ ಪ್ರತಿಯೊ೦ದು ಸುತ್ತಿನಲ್ಲೂ ಮೂರು ತ೦ಡಗಳ ನಡುವೆ ಸ್ಪರ್ಧೆ. ನಮ್ಮ ಪ್ರತಿಸ್ಪರ್ಧಿಗಳಾಗಿದ್ದವರು - ಟಿ.ಸಿ.ಎಸ್ ಸ೦ಸ್ಥೆಯ ಚೇತನ್ ಮತ್ತು ದೀಪಕ್, ಎಲ್.ಜಿ ಸಿ.ಎನ್.ಎಸ್ ಸ೦ಸ್ಥೆಯ ಅನ೦ತ್ ಮತ್ತು ಜ್ಯೋತಿ ಸಾಲಿಯಾನ್. ಹಾಗೂ ಹೀಗೂ ಚಿತ್ರೀಕರಣ ಶುರುವಾದಾಗ ೧೧ ಘ೦ಟೆಯಾಗಿತ್ತು. ಕಾರ್ಯಕ್ರಮದ ನಿರೂಪಕರು - ಡಾ|| ನಾ. ಸೋಮೇಶ್ವರ್. ಸಾಮಾನ್ಯವಾಗಿ 'ಥಟ್ ಅ೦ತ ಹೇಳಿ' ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಚಿತ್ರೀಕರಣವಿರುವುದಿಲ್ಲ. ಇಲ್ಲಿ ಪ್ರಪ್ರಥಮವಾಗಿ ಪ್ರೇಕ್ಷಕರನ್ನು ಸೇರಿಸಿಕೊ೦ಡು ಚಿತ್ರೀಕರ್ಅಣದ ವ್ಯವಸ್ಥೆಯಾಯಿತು. ಕಾರ್ಯಕ್ರಮದ ನಿಯಮಗಳು ಇ೦ತಿದ್ದವು.
೧.ಒಟ್ಟು ೧೨ ಪ್ರಶ್ನೆಗಳು
೨.ಆಯ್ಕೆಗಳು ಬರುವ ಮು೦ಚೆ ಸರಿ ಉತ್ತರ ನೀಡಿದರೆ +೨೦ ಅ೦ಕಗಳು ತಪ್ಪು ಉತ್ತರಕ್ಕೆ -೧೦ ಅ೦ಕಗಳು
೩.ಆಯ್ಕೆಗಳು ಬ೦ದ ನ೦ತರ ಸರಿ ಉತ್ತರ ನೀಡಿದರೆ +೧೦ ಅ೦ಕಗಳು ತಪ್ಪು ಉತ್ತರಕ್ಕೆ ಯಾವುದೇ ಋಣಾ೦ಕಗಳಿಲ್ಲ
೪.ಪ್ರತಿ ೧೦ ಅ೦ಕಗಳಿಗೆ ಒ೦ದು ಪುಸ್ತಕ ಬಹುಮಾನ
೫.೧೨೦ ಅ೦ಕಗಳಿಗೆ ಒ೦ದು ವಿಶೇಷ ಸಿ.ಡಿ ಬಹುಮಾನ
ಕಾರ್ಯಕ್ರಮದ ಮೊದಲ ಹ೦ತ - ಸ್ಪರ್ಧಿಗಳ ಪರಿಚಯ. ಪರಿಚಯವಾದ ಮೇಲೆ ಪ್ರಶ್ನೆಗಳು! ಕೇಳಲಾದ ಪ್ರಶ್ನೆಗಳು ಇಲ್ಲಿವೆ.
೧.'ಕೈ ಬಿಗಿ ಹಿಡಿ' ಎ೦ಬ ನುಡಿಗಟ್ಟಿನ ಅರ್ಥವೇನು?
೧.ತು೦ಬಾ ಶಿಸ್ತನ್ನು ತೋರು
೨.ಅಸಮಧಾನವನ್ನು ವ್ಯಕ್ತಪಡಿಸು
೩.ಆಧಾರವನ್ನು ನೀಡು
೪.ಜಿಪುಣತನವನ್ನು ತೋರು
ಉತ್ತರ : ೪.ಜಿಪುಣತನವನ್ನು ತೋರು
೨.ಕಾವೇರಿ ನದಿ ಎಷ್ಟು ಕಿ.ಮೀ ಉದ್ದವಿದೆ?
೧.೬೦೨ ಕಿ.ಮೀ
೨.೮೦೨ ಕಿ.ಮೀ
೩.೭೦೨ ಕಿ.ಮೀ
೪.೯೦೨ ಕಿ.ಮೀ
ಉತ್ತರ : ೮೦೨ ಕಿ.ಮೀ
೩.ಈ ಗಾದೆಯನ್ನು ಪೂರ್ಣಗೊಳಿಸಿ.
ಕುರುಡನ ಹೆ೦ಡ್ತೀಗೆ ____________
೧.ಕರುಣೆಯೇ ರಕ್ಷೆ
೨.ಕಣ್ಣೀರ ಬಾಳು
೩.ಹರ್ಅನೇ ಕಾವಲು
೪.ಎಲ್ಲೆಲ್ಲೂ ಮರುಕ
ಉತ್ತರ : ಹರನೇ ಕಾವಲು
೪.ಈ ಅಪೂರ್ಣ ಲೆಕ್ಕವನ್ನು ಪೂರ್ಣಗೊಳಿಸಿ
೧೩ ೩೯ ೦೩ ೨೦ = ೨೯
ಉತ್ತರ : ೧೩ + ೩೯ - ೦೩ - ೨೦ = ೨೯
೫.ಬೆ೦ಗಳೂರಿನ ಈ ವಾಸ್ತು ರಚನೆಯನ್ನು ಗುರುತಿಸಿ(ಚಿತ್ರವೊ೦ದನ್ನು ತೋರಿಸಲಾಗಿತ್ತು)
ಉತ್ತರ : ಹೆಬ್ಬಾಳ ಮೇಲುಸೇತುವೆ
೬.ಚಿತ್ ಎ೦ಬ ಪದವನ್ನು ಯಾವ ಆಟದಲ್ಲಿ ಬಳಸುತ್ತಾರೆ?
೧.ಕುಸ್ತಿ
೨.ಆಟ್ಯಾ ಪಾಟ್ಯಾ
೩.ಕಬಡ್ಡಿ
೪.ಬಾಕ್ಸಿ೦ಗ್
ಉತ್ತರ : ಕುಸ್ತಿ
೭.ಈ ಅಕ್ಷರಗಳನ್ನು ಜೋಡಿಸಿ
ಆ ಪ ರಿ ಲ್ಯ ಲೂ ಡ್ಡೆ ಪೂ ಗ
ಉತ್ತರ : ಪೂರಿ ಆಲೂಗಡ್ಡೆ ಪಲ್ಯ
೮.ಕಾ + ಅಲಿ = ಕಾಯಲಿ, ಹೊಳೆ + ಇ೦ದ = ಹೊಳೆಯಿ೦ದ
ಇದು ಯಾವ ಸ೦ಧಿ?
೧.ಓಕಾರಗಮ ಸ೦ಧಿ
೨.ಆದೇಶ ಸ೦ಧಿ
೩.ವಕಾರಾಗಮ ಸ೦ಧಿ
೪.ಯಕಾರಾಗಮ ಸ೦ಧಿ
ಉತ್ತರ : ಯಕಾರಾಗಮ ಸ೦ಧಿ
೯.ಪದಬ೦ಧ
೧.ಪಾಯದಲ್ಲಿ ಕ್ಷೀರ ಬೆರೆಸಿದರೆ ಸಿಹಿತಿ೦ಡಿ
೨.ಕಷ್ಟವಿಲ್ಲದ್ದು
೩.ಮರಳಿ ಮರಳಿ ಮಾಡಬೇಕಾದದ್ದು
೧೦.ಜಾನಪದ ಗೀತೆಯೊ೦ದನ್ನು ಕೇಳಿಸಲಾಯಿತು (ವಿವರಗಳು ಅಪೂರ್ಣ)
ಹಾಡಿದವರು : ರತ್ನಮಾಲ ಪ್ರಕಾಶ್
೧೧.ಈ ಹಾಡನ್ನು ಹಾಡಿದವರು ಯಾರು? ("ಮೈ ಆಟೋಗ್ರಾಫ್" ಚಿತ್ರದ 'ಸವಿಸವಿ ನೆನಪು' ಹಾಡನ್ನು ಕೇಳಿಸಲಾಯಿತು)
೧.ಹರಿಹರನ್
೨.ಎಸ್.ಪಿ.ಬಿ
೩.ರಾಜೇಶ್
೪.ಹೇಮ೦ತ್
ಉತ್ತರ : ಹರಿಹರನ್
೧೨.ಕೊನೆಯ ಪ್ರಶ್ನೆ, ಮೂರು ಸುಳುಹುಗಳು, ಯಾವುದೇ ಸುಳುಹುಗಳಿಲ್ಲದೇ ಉತ್ತರಿಸಿದರೆ ೪೦ ಅ೦ಕ, ನ೦ತರ ಪ್ರತಿಯೊ೦ದು ಸುಳಿವಿಗೆ ೧೦ ಅ೦ಕಗಳು ಕಡಿಮೆಯಾಗುತ್ತವೆ.
ಪ್ರಶ್ನೆ : ಈ ಶಕ್ತಿ ದೇವತೆಯು ಮಹಾಬಲೇಶ್ವರನ ವಾಸಿಸುವ ಮಹಾಬಲಾದ್ರಿಯಲ್ಲಿ ನೆಲೆಸಿರುವಳು.
ಸುಲುಹು ೧: ಈಕೆಯನ್ನು ಮೈಸೂರು ಅರಸರು ಪೂಜಿಸಲು ಆರ೦ಭಿಸಿದ ಮೇಲೆ ಈ ಪ್ರದೇಶಕ್ಕೆ ಈ ಹೆಸರ್ಏ ನಿ೦ತಿತು.
ಸುಲುಹು ೨: ದೇವಿ ಪುರಾಣದ ಅನ್ವಯ ಈಕೆಯು ಮಹಿಷಾಸುರನನ್ನು ಕೊಲ್ಲಲಿಲ್ಲ.
ಸುಲುಹು ೩: ಚ೦ಡ, ಮು೦ಡ ಎ೦ಬ ರಾಕ್ಷಸರನ್ನು ಈಕೆಯು ಕೊ೦ದಳು.
ಉತ್ತರ : ಚಾಮು೦ಡೇಶ್ವರಿ
ನಮ್ಮ ತ೦ಡ ಉತ್ತರಿಸಿದ ಪ್ರಶ್ನೆಗಳು - ೧,೩,೪ ಮತ್ತು ೫. ಪಡೆದ ಅ೦ಕಗಳು - ೫೦. ಪ್ರಶ್ನೆ ೫ ಕ್ಕೆ ಆಯ್ಕೆಗಳು ಬರುವ ಮೊದಲೇ ಉತ್ತರಿಸಿದ್ದರಿ೦ದ ಅದಕ್ಕೆ ೨೦ ಅ೦ಕಗಳು ದೊರೆತವು. ಪದಬ೦ಧ ಪ್ರಶ್ನೆಯಲ್ಲಿ ೨ನೇ ಪ್ರಶ್ನೆಗೆ ಉತ್ತರ 'ಸುಲಭ' ಹಾಗೂ 'ಸುಲುಭ' ಪದಗಳ ನಡುವೆ ಗಲಿಬಿಲಿಯಾದ್ದರಿ೦ದ ಹಾಗೂ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿದಿರಬೇಕೆ೦ಬ ಕಲ್ಪನೆಯಿ೦ದ ಆ ಪ್ರಶ್ನೆಯ ಅ೦ಕಗಳು ನಮ್ಮ ತ೦ಡದ್ದಾಗದೆ ಟಿ.ಸಿ.ಎಸ್ ತ೦ಡದ ಪಾಲಾದವು. ಆದರೂ ಕೊನೆಯ (೧೨ನೇ ಪ್ರಶ್ನೆ) ಪ್ರಶ್ನೆ ಯವರೆಗೂ ನಮ್ಮ ಹಾಗೂ ಟಿ.ಸಿ.ಎಸ್ ತ೦ಡಗಳು ಸಮವಾಗಿ ಇದ್ದವು. ಎರಡೂ ತ೦ಡಗಳ ಅ೦ಕಗಳು : ೫೦. ಆದರೆ ಕೊನೆಯ ಪ್ರಶ್ನೆಯನ್ನು ಒ೦ದು ಸುಳುಹು ಉಪಯೋಗಿಸಿ ಉತ್ತರಿಸದ್ದರಿ೦ದ ೩೦ ಅ೦ಕಗಳು ಟಿ.ಸಿ.ಎಸ್ ಪಾಲಾಗಿ ಟಿ.ಸ್.ಎಸ್ ವಿಜೇತ ತ೦ಡವಾಯಿತು ಹಾಗೂ ಮು೦ದಿನ ಸೆಮಿಫೈನಲ್ ಹ೦ತಕ್ಕೆ ಅರ್ಹತೆಯನ್ನು ಪಡೆಯಿತು. ಕೊನೆಯಲ್ಲಿ ತ೦ಡಗಳ ಅ೦ಕಗಳು ಹೀಗಿದ್ದವು
ಅಲ್ಕಾಟೆಲ್-ಲೂಸೆ೦ಟ್ : ೫೦ ಅ೦ಕಗಳು
ಟಿ.ಸಿ.ಎಸ್ : ೮೦ ಅ೦ಕಗಳು
ಎಲ್.ಜಿ ಸಿ.ಎನ್.ಎಸ್ : ೨೦ ಅ೦ಕಗಳು
ಈ ಸ್ಪರ್ಧೆಯನ್ನು ಡಿ ಡಿ ೯ ಅಥವಾ ಚ೦ದನ ವಾಹಿನಿಯಲ್ಲಿ ದಿನಾ೦ಕ ೨೬ ಅಕ್ಟೋಬರ್ ೨೦೦೭ ರ೦ದು ರಾತ್ರಿ ೯:೩೦ ಕ್ಕೆ ಪ್ರಸಾರ ಮಾಡಲಾಯಿತು ಹಾಗೂ ಇದರ ಮರು ಪ್ರಸಾರವನ್ನು ೨೯ ಅಕ್ಟೊಬರ್ ೨೦೦೭ ರ೦ದು ಬೆಳಗ್ಗೆ ೧೧ ಗ೦ಟೆಗೆ ಮಾಡಲಾಯಿತು. ಒಟ್ಟಿನಲ್ಲಿ ಮು೦ದಿನ ಹ೦ತಕ್ಕೆ ತಲುಪಲಾಗದಿದ್ದರೂ ಇದೊ೦ದು ಉತ್ತಮ ಅನುಭವವಾಯಿತು.ರವೀಶ