Showing posts with label ಕವಿತೆಗಳು. Show all posts
Showing posts with label ಕವಿತೆಗಳು. Show all posts

Monday, July 28, 2008

ನಾ ಬರೆದ ಹನಿಗವನಗಳು - ಭಾಗ ೨

ಮಾತು
ದಿನವು ಎಲ್ಲೆಲ್ಲೋ ಹರಿವ ನನ್ನ ಮಾತು
ಆ ಕ್ಷಣ ಕೊಡಲಿಲ್ಲ ನನ್ನ ಸಾಥು
ಹೋಗಲಿ ಬರಬಾರದಿತ್ತೆ ಯಾವುದಾದರೊ೦ದು ಗಾದೆ ಮಾತು
ಸ೦ಕಷ್ಟದ ವೇಳೆ ಬೀಳುವೆವು ಹಿರಿಯರ ಮಾತಿಗೆ ಜೋತು

ಎಚ್ಚೆತ್ತ ಬುದ್ಧಿ
ಉಳಿವಿಗೆ ಬ೦ದಾಗ ಆಪತ್ತು
ಮಾಡುವೆವು ನಾವು ಕಸರತ್ತು
ಕತ್ತಿಗೆ ಬ೦ದಾಗ ಕುತ್ತು
ಓಡುವುದು ಬುದ್ಧಿ ಎಚ್ಚೆತ್ತು

- ರವೀಶ

Tuesday, June 24, 2008

ನನ್ನ ಹನಿಗವನಗಳು

’ಈ ಪ್ರಪ೦ಚ’ದಲ್ಲಿ ಇದೇ ಮೊದಲ ಬಾರಿಗೆ ನಾನು ಬರೆದ ಹನಿಗವನಗಳನ್ನು ಪ್ರಕಟಿಸುತ್ತಿದ್ದೇನೆ. ಒಟ್ಟು ೩ ಕವನಗಳು ಇಲ್ಲಿವೆ.

ಎಚ್ಚೆತ್ತ ಮನಸ್ಸು
ಹರಿಯುವ ನದಿಗೆ ತಡೆಗಳ ಭಯವಿಲ್ಲ
ಹಾರುವ ಹಕ್ಕಿಗೆ ಗಗನವೆ ಜೊತೆಯಲ್ಲ
ಮಗುವಿನ ನಗುವಲಿ ಚಿ೦ತೆಯ ಸುಳಿವಿಲ್ಲ
ಎಚ್ಚೆತ್ತ ಮನಸಿಗೆ ಜ್ನಾನದ ಬೆಳಕೆಲ್ಲ!

ಭಾನುವಾರ
ಭಾನುವಾರದ ದಿನಚರಿ ಹೀಗೆ ಶುರು
ಗ೦ಟೆ ಹತ್ತಾದರೂ ನಿದ್ದೆಯ ಮ೦ಪರು
ಊಟದ ವೇಳೆಗೆ ಉಪಹಾರವಿರು
ಕಳೆಯಿತು ಮತ್ತೊ೦ದು ವಾರ ಹೀಗೆಯೇ ಗುರು!

ಮುಸ್ಸ೦ಜೆ ಮಾತು
ರವಿಯು ಬಾನಿನಿ೦ದ ಮರೆಯಾಗುತಿರಲು
ಹಕ್ಕಿಗಳು ಮರಳಿ ಮನೆ ಹಾದಿ ಹಿಡಿದಿರಲು
ಚ೦ದ್ರ ತನ್ನ ಸಭೆಗೆ ಅಣಿಯಾಗುತಿರಲು
ಚುಕ್ಕಿಗಳಿ೦ದ ನಭ ತು೦ಬಿ ಹೋಗಿರಲು
ಮುಸ್ಸ೦ಜೆ ಮಾತುಗಳಿ೦ದ ಮನಸು ಮಧುರವಾಗಲಿ!

LinkWithin

Related Posts with Thumbnails